ಮೌನವೇ ಮಾತಾದಾಗ..

ಸಂಜೆಯ ರಂಗು ಹರಡುತಿರಲು ಮುಗಿಲಲ್ಲಿ,

ಬಾನಕ್ಕಿಗಳ ಇಂಪಾದ ಇಂಚರದ ನಡುವಲ್ಲಿ,

ನೇಸರ ಚಾಚಿದ ಹಚ್ಚ ಹಸುರಿನ ತೋರಣದ ತಂಪಲ್ಲಿ|

ಪಿಸುಗುಡುವ ತಂಗಾಳಿಯ ಅಪ್ಪುಗೆಯಲಿ,

ರೆಪ್ಪೆ ಮುಚ್ಚದೆ ನಿಟ್ಟ ಆ ನಿನ್ನ ನೋಟದಲಿ,

ನಾಚಿ ನಿಂತ ಹೆಣ್ಣಿನ ಮನದಂಗಳದಲಿ,

ಪ್ರೀತಿಯ ಮಧುವನು ಸವೆದ ನನ್ನ ನಿನ್ನ ನಡುವಲಿ,

ಮೌನವೇ ಮಾತಾದಾಗ…..!! 

ನೀ ಇಲ್ಲೆ ಇರುವೆ….

ಕಾತರಗೊಂಡಿಹ ನನ್ನೀ ಮನಕೆ,

ಹುಡುಕುತ ನಿನ್ನನು ಅಲೆಯುವ ಜೀವಕೆ,

ಸದಾ ಉಸಿರಲಿ ಬೆರೆತಿರುವ ನಿನ್ನ ಕನವರಿಕೆಗೆ,

ಕಾಣದೆ ನಿನ್ನನು ಸೋತಿರುವ ಕಣ್ಣ್ಗಳಿಗೆ,

ಮೌನವೇ ಉತ್ತರವಾದಗ….

ಬೀಸಿತು ತಂಗಾಳಿ, ತಂದಿತು ಸಂದೇಶ,

ನೀ ಇಲ್ಲೇ ಇರುವೆ, ನೀ ಇಲ್ಲೇ ಇರುವೆ!

ನನ್ನ ಜೊತೆಯಲೆ,

ನನ್ನ ಮನದಲೆ, ನನ್ನ ಮನದಲೆ!

woman-at-beach-looking-at-sea1

ನಾ ಹೇಳಲಾರೆ, ನೀ ಕೇಳಲಾರೆ..

ನಾ ಹೇಳಲಾರೆ, ನೀ ಕೇಳಲಾರೆ..

ಈ ಮುಸ್ಸಂಜೆಯ ತಂಪಲ್ಲಿ ಒಂಟಿಯಾಗಿ ನಾ ನಡೆವಾಗ,

ಹುದುಗಿತೊಂದು ಕವನ ನನ್ನ ಅಂತರಂಗದಲ್ಲಿ..

ಚಂದ್ರ ತಾರೆಗಳು ಮುಗಿಲ ಮುತಿಕ್ಕುವ ಸಮಯದಲ್ಲಿ,

ನೀ ಆಡುತಿದ್ದ ಪ್ರೀತಿಯ ಪಿಸು ಮಾತಿನ ಇಂಪನ ನನ್ನ ಕಿವಿಯಲ್ಲಿ,

ದೂರವಿದ್ದರೂ ನಿನ್ನ ಒಲವ ಸಿಂಚನ ಕಣ್ಣಲ್ಲಿ,

ನಿನ್ನ ಆಲಿಂಗನದ ಅರವಳಿಕೆಯ ಹೇಗೆ ತಾನೇ ಮರೆಯಲಿ!!….

ಆ ಸವಿ ನೆನಪ, ಮಧುರ ಸುಮವ

ಮತ್ತೆ ಮತ್ತೆ ಜ್ಞಾಪಿಸುವ ಮನ!

ನಿನ್ನ ಪ್ರೀತಿಯ ಮರೆಯದೆ ಬಚ್ಚಿಡುವ

ಎನ್ನ ಹೃದಯದ ಮಾತಾ ನೀ ಕೇಳ….

ಸಣ್ಣ ನಸು ನಗುವ ಹೊತ್ತು, ನಿನ್ನ ಬೆರಳೊಂದಿಗೆ ಬೆರಳುಗೂಡಿಸಿ,

ನಿನ್ನ ಹೆಜ್ಜೆಯೊಂದಿಗೆ ಹೆಜ್ಜೆ ಇಡುವ ಸಂಭ್ರಮದಲ್ಲಿ ….

ಕೈಗಳು ಸೋಕಿದ ಆ ಕ್ಷಣ ತಲ್ಲಣಗೊಂಡಿತು ಮನ!

ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ,

ನಾಚಿ ನೀರಾಯಿತು ಎನ್ನ ಮನ!

ಓ ನಲ್ಲ,

ರೋಮಾಂಚನ ಗೊಂಡಿತು ತನುವು,

ನಿನ್ನ ಆ ಒಂದು ಸ್ಪರ್ಶದಿಂದ!

ಪ್ರೀತಿಯೆಂದರೆ ಇದೆಯೋ??

ಮನಗಳು ಮಿಡಿಯುವ ತರವೋ..

ಬಾನಕ್ಕಿಗಳು ಹಾದು ಹೋಗುವಾಗ,

ಸೂರ್ಯ ತಾ ಮರೆಯಾಗುವಾಗ,

ಮುಸ್ಸಂಜೆಯ ಪಡುವಣ ಕೆಂಪೇರುವಾಗ,

ತಂಗಾಳಿಯು ತನುವ ಸೋಕಿಸುವಾಗ,

ಮನದ ಆಸೆಯ ಬಿಚ್ಚಿಡುವ ಹಂಬಲ ಎನ್ನಲಿ..

ಆದರೂ ಏಕೋ,

ನಾ ಹೇಳಲಾರೆ

ನೀ ಕೇಳಲಾರೆ… !!

Naa heLalaare, nee keLalaare..

Ee mussanjeya tampalli ontiyagi naa nadevaga,
Hudugithondu Kavana Nana antarangadalli..

Chandra taaregaLu mugila muthikkuva samayadalli,
Nee aadutida preethiya pisu maathina impana Nana kiwiyalli,
Dooraviddaru ninna olava sinchana KaNNalli,
Ninna aalinganada aravaLikeya hege taane mareyali!!….

Aa savi nenapa, Madhura sumava
Mathe mathe gnapisuva mana!
Ninna preethiya mareyade bachiduva
Enna hrudayada maatha nee keLaa..

SaNNa nasu naguva hothu, ninna beraLondige beraLugoodisi
Ninna hejjeyondige hejje iduva sambramadalli ….

KaigaLu sokida aa kshana tallaNagonditu mana!
KaNNalli kaNNittu nodidaga,
Naachi neeraaitu Enna mana!

O nalla,

Romanchana gonditu tanuvu,
Ninna aa ondu sparshadidna..
Preethiyendare ideyo??
managaLu midiyuva taravo..

BaanakkigaLu haadu hoguvaga,
Surya taa mareyaguvaga,
Mussanjeya paduvaNa kemperuvaga,
TangaLiyu tanuva sokisuvaga,
Manada aaseya bichiduva hambala ennali

Adaroo eko,

Naa heLalaare
Nee keLalaare… !!images (2)